ಯಶ್ ಮನೆಯಲ್ಲಿ ಜನವರಿ ತಿಂಗಳು ಸಂಭ್ರಮವೋ ಸಂಭ್ರಮ | Filmibeat Kannada

2018-01-12 898

ರಾಕಿಂಗ್ ಸ್ಟಾರ್ ಯಶ್ ಗೆ ಜನವರಿ ತಿಂಗಳು ತುಂಬಾನೇ ವಿಶೇಷ. ಯಾಕಂದ್ರೆ, ಆ ತಿಂಗಳಲ್ಲಿ ಮಾಸ್ಟರ್ ಪೀಸ್ ಹುಟ್ಟುಹಬ್ಬ. ಜನವರಿ 8 ರಂದು ಯಶ್ ಬರ್ತಡೇ ಸಂಭ್ರಮವನ್ನ ಅವರ ಕುಟುಂಬದವರು ಹಾಗೂ ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸುತ್ತಾರೆ. ನಿಮಗೆ ಗೊತ್ತಿಲ್ಲದ ವಿಷ್ಯ ಏನಪ್ಪಾ ಅಂದ್ರೆ, ಜನವರಿ 8ನೇ ತಾರೀಖು ಮಾತ್ರವಲ್ಲ, ಜನವರಿ ತಿಂಗಳು ಪೂರ್ತಿ ಒಂದು ರೀತಿಯಲ್ಲಿ ಯಶ್ ಕುಟುಂಬಕ್ಕೆ ವಿಶೇಷವೇ ಸರಿ. ಹೌದು, ಯಶ್ ಹುಟ್ಟುಹಬ್ಬ ಆಚರಿಸಿಕೊಂಡ, ಎರಡು ದಿನದ ನಂತರ ಅವರ ತಂದೆಯ ಜನುಮದಿನ. ಅಂದ್ರೆ, ಜನವರಿ 10 ರಂದು ಯಶ್ ಅವರ ಅಪ್ಪನ ಹುಟ್ಟುಹಬ್ಬ. ಈ ಸಂಭ್ರಮವನ್ನ ಕೂಡ ಕುಟುಂಬವೆಲ್ಲ ಸೇರಿ ಸಂಭ್ರಮಿಸಿದ್ದಾರೆ. ಇತ್ತೀಚೆಗಷ್ಟೇ ಈ ಫೋಟೋ ರಾಧಿಕಾ ಪಂಡಿತ್ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು. ಎರಡು ದಿನ ಅಂತರದಲ್ಲಿ ಎರಡು ಹುಟ್ಟುಹಬ್ಬ ಸೆಲೆಬ್ರೆಟ್ ಮಾಡಿದ ಯಶ್ ಫ್ಯಾಮಿಲಿಯಲ್ಲಿ, ಇನ್ನು ಎರಡು ದಿನ ಬಿಟ್ಟು ಇನ್ನೊಂದು ಬರ್ತಡೇ ಇದೆ. ಅದು ಯಶ್ ಅವರ ತಂಗಿ ನಂದಿನಿ ಅವರದ್ದು. ಹೌದು, ಜನವರಿ 12 ರಂದು ಯಶ್ ಸಹೋದರಿಯ ಹುಟ್ಟುಹಬ್ಬ.

On Jan 8th Yash's Birthday was celebrated all over Karnataka by his fans and Even his Family celebrated his birthday grandly . But that doesn't end the party for the family every January

Videos similaires